ಬಡವ ಬಡವಿ ಅನ್ನಿಸಿಕೊಂಡಿದ್ದ ತುಕಾಲಿ ಸಂತು ಮತ್ತು ಮಾನಸಾ, ಕಳೆದ ಬಾರಿ ಹೊಸ ಕಾರು ಖರೀದಿ ಮಾಡಿದ್ದು, ಆಮೇಲೆ ಅದು ಆಕ್ಸಿಡೆಂಟ್ ಆಗಿದ್ದ ವಿಚಾರ ಗೊತ್ತೇ. ಈಗ ಈ ಜೋಡಿ ಮತ್ತೊಂದು ಹೊಸ ಕಾರು ಖರೀದಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬಿಗ್ ಬಾಸ್ ಕನ್ನಡ 10 ಮುಗಿಯುತ್ತಿದ್ದಂತೆಯೇ 25 ಲಕ್ಷ ರೂಪಾಯಿ ಮೌಲ್ಯದ ಕಾರು ಖರೀದಿಸಿದ್ದ ಸಂತು, ಈಗ ಮತ್ತೊಂದು ಹೊಸ ಕಾರು ತಂದಿದ್ದಾರೆ. ಈ ಹಿಂದೆ ಅವರು ಹೊಸ ಕಾರು ಖರೀದಿಸಿ, ತಮ್ಮ ತಂಡದವರಿಗೆ ಸಣ್ಣ ಸ್ವೀಟ್ ಕೊಟ್ಟಿದ್ದರು, ಅದನ್ನು ನೋಡಿದ ನೆಟ್ಟಿಗರು ಭಾರೀ ಕಾಮಿಡಿ ಮಾಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಅವರ ಕಾರು ಅಪಘಾತಕ್ಕೀಡಾಗಿ ಹಾನಿಗೊಳಗಾಗಿತ್ತು.
ಈಗ ಸಂತು ಮತ್ತು ಮಾನಸಾ ತಮ್ಮ ಹೊಸ ಕಾರು ಖರೀದಿಸಿರುವ ವಿಚಾರವನ್ನು ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಜೋಡಿಗೆ ಶುಭಾಶಯ ಕೋರಿದ್ದಾರೆ. ಪ್ರತಿಕ್ರಿಯೆ ನೀಡಿದ ಮಾನಸಾ, “ಹಳೆಯ ಕಿಯಾ ಕಾರು ಇದೆ, ಇದು ಯೆಲ್ಲೋ ಬೋರ್ಡ್ ಕಾರು” ಎಂದಿದ್ದಾರೆ.
“ಈಗಾದರೂ ಕಾರನ್ನು ಪ್ರೀತಿಸಿ, ಅಪಘಾತ ಮಾಡಬೇಡಿ” ಎಂಬ ನೆಟ್ಟಿಗರೊಬ್ಬರ ಕಾಮೆಂಟ್‌ಗೆ ಮಾನಸಾ, “ಅಪಘಾತ ಮಾಡೋಕೆ ನಮಗೆ ಖುಷಿಯೇ? ಎಲ್ಲ ನಮ್ಮ ಗ್ರಹಚಾರ” ಎಂದು ಉತ್ತರಿಸಿದ್ದಾರೆ. ಇನ್ನೊಬ್ಬರು “ಒಬ್ಬ ಒಳ್ಳೆಯ ಗಂಡನ ಯಶಸ್ಸಿನ ಹಿಂದೆ ಹೆಣ್ಣು ಇರ್ತಾಳೆ” ಎಂಬ ಮಾತಿಗೆ ಮಾನಸಾ ಸಂತೋಷ ವ್ಯಕ್ತಪಡಿಸಿದ್ದಾರೆ.
(ಮಿತ್ರರೇ, ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ NammaKannadaDhwani.com ಅನ್ನು ಬೆಂಬಲಿಸಿ. ದಿನನಿತ್ಯದ ತಾಜಾ ಸುದ್ದಿಗಳಿಗಾಗಿ ನಮ್ಮ ವಾಹಿನಿಯನ್ನು ಲೈಕ್ ಮಾಡಿ, ಶೇರ್ ಮಾಡಿ!)