ಬಾಲಿವುಡ್ ನಟಿ ಮತ್ತು ಮಾಡೆಲ್ ಪೂನಂ ಪಾಂಡೆ ಅವರ ಹೊಸ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ಅವರೊಬ್ಬ ಅಭಿಮಾನಿ ಅಪರೂಪದ ರೀತಿಯಲ್ಲಿ ವರ್ತಿಸಿರುವುದು ಕಂಡುಬಂದಿದೆ.

ಇತ್ತೀಚೆಗೆ ಮುಂಬೈನಲ್ಲಿ ಪತ್ತೆಯಾಗಿದ್ದ ಪೂನಂ ಪಾಂಡೆ ಕೆಂಪು ಬಣ್ಣದ ಗೌನ್ ಮತ್ತು ಬೂದು ಬಣ್ಣದ ಡೆನಿಮ್ ಜಾಕೆಟ್ ಧರಿಸಿದ್ದರು. ಆಕೆಯೊಂದಿಗಿನ ಭೇಟಿಯನ್ನು ಬಳಸಿಕೊಂಡ ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಆಕೆಯ ಹತ್ತಿರ ಬಂದು ಅನಿರೀಕ್ಷಿತವಾಗಿ ಕಿಸ್ ಮಾಡಲು ಪ್ರಯತ್ನಿಸಿದ.
ಈ ವೇಳೆ ಪೂನಂ ಪಾಂಡೆ ಆತನಿಂದ ದೂರ ಸರಿಯುತ್ತಾ ಬೆಚ್ಚಿಬಿದ್ದಳು. ಅಕ್ಕಪಕ್ಕದಲ್ಲಿದ್ದವರು ಕೂಡ ತಕ್ಷಣ ಆ ವ್ಯಕ್ತಿಯನ್ನು ದೂರ ಸರಿಸಿದರು.
ಈ ಘಟನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಇದನ್ನು ಪಬ್ಲಿಸಿಟಿ ಸ್ಟಂಟ್ ಎಂದು ವ್ಯಾಖ್ಯಾನಿಸಿದರೆ, ಇತರರು ಆ ಅಭಿಮಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಲವರು “ಇದು ನಾಟಕದ ಭಾಗವೋ?” ಎಂದು ಅನುಮಾನ ವ್ಯಕ್ತಪಡಿಸಿದ್ದು, ಮತ್ತೊಬ್ಬರು “50 ರೂಪಾಯಿ ಓವರ್ ಆಕ್ಟಿಂಗ್” ಎಂಬಂತೆ ವ್ಯಂಗ್ಯಮಾಡಿದ್ದಾರೆ.
ಕೆಲವು ಬಳಕೆದಾರರು “ಅವಳು ವೈರಲ್ ಆಗಲು ಇದೆಲ್ಲಾ ಮಾಡುತ್ತಾಳೆ” ಎಂದು ಟೀಕಿಸಿದ್ದಾರೆ.
ಈ ಘಟನೆ ಸತ್ಯವೋ ಅಥವಾ ಪಬ್ಲಿಸಿಟಿ ಗಿಮಿಕ್ಕೋ ಎನ್ನುವುದು ಖಚಿತವಾಗದಿದ್ದರೂ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ!