ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಡಿವೋರ್ಸ್ ನಂತರ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಆಕ್ಟಿವ್ ಆಗಿದ್ದಾರೆ. ಹಿಂದೆಯೂ ಅವರು ಫೋಟೋ ಮತ್ತು ವಿಡಿಯೋ ಶೇರ್ ಮಾಡುತ್ತಿದ್ದರು, ಆದರೆ ಈಗ ಮತ್ತಷ್ಟು ರೀಲ್ಸ್ ಮಾಡುತ್ತಾ ವೈರಲ್ ಆಗುತ್ತಿದ್ದಾರೆ.

ಇತ್ತೀಚೆಗೆ ಅವರು ಬ್ಲೂ ಟಾಪ್ ಮತ್ತು ಬ್ಲ್ಯಾಕ್ ಮಿನಿ ಸ್ಕರ್ಟ್ ಧರಿಸಿ, ಕೂದಲನ್ನು ಫ್ರೀಯಾಗಿ ಬಿಡಿಸಿಕೊಂಡು ಡ್ಯಾನ್ಸ್ ಮಾಡಿರುವ ರೀಲ್ಸ್ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆದರೂ, ನೆಟ್ಟಿಗರಿಗೆ ಇದು ಅಚ್ಚುಮೆಚ್ಚಾಗಿಲ್ಲ. “ಖರಾಬು ಡ್ಯಾನ್ಸ್ ಮಾಡಿ ಹಾಡನ್ನು ಹಾಳು ಮಾಡಿದೆ” ಎಂದು ಅವರು ಟೀಕಿಸಿದ್ದಾರೆ.
ನಿವೇದಿತಾ ಗೌಡ ಅವರ ಕುಣಿತದ ಶೈಲಿಯನ್ನು ಕಂಡ ಕನ್ನಡ ಸಿನಿ ಪ್ರೇಮಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಇಷ್ಟು ಚೆಂದದ ಹಾಡಿಗೆ ಈ ರೀತಿ ಡ್ಯಾನ್ಸ್ ಮಾಡ್ತಾರಾ?” ಎಂದು ಪ್ರಶ್ನಿಸಿದ್ದಾರೆ. ವಿಶೇಷವಾಗಿ, “ಬೆಳ್ಳಿ ಮೋಡ ಇವಳ ಮನಸು, ಮನಸುಮಿಂಚು ಬಳ್ಳಿ ಇವಳ ಮುನಿಸು..” ಎಂಬ ಹೃದಯಸ್ಪರ್ಶಿ ಗೀತೆಗೆ ಇಂತಹ ರೀಲ್ಸ್ ಮಾಡಿರುವುದು ಮೆಚ್ಚುಗೆಯನ್ನು ಪಡೆಯದಂತಾಗಿದೆ.
ನೀವೂ ಕನ್ನಡದ ಪ್ರತಿಷ್ಠಿತ ನ್ಯೂಸ್ ಚಾನಲ್ Namma Kannada Dhwani ಅನ್ನು ಬೆಂಬಲಿಸಿ! ದಿನನಿತ್ಯದ ತಾಜಾ ಸುದ್ದಿಗಳಿಗೆ ನಮ್ಮ ವಾಹಿನಿಯನ್ನು ಲೈಕ್ ಮಾಡಿ, ಶೇರ್ ಮಾಡಿ.