ಒಂದೆಡೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂದು ಗಂಡು ಮಕ್ಕಳು ಬೇಸರಪಡುತ್ತಿರುವಾಗ, ಮತ್ತೊಂದೆಡೆ ವರದಕ್ಷಿಣೆ ಸಂಬಂಧಿತ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ, 10 ಲಕ್ಷ ರೂ. ಮತ್ತು ಎಸ್‌ಯುವಿ ಕಾರು ನೀಡದ ಕಾರಣಕ್ಕೆ ಅತ್ತೆ-ಮಾವ ತಮ್ಮ ಸೊಸೆಗೆ ಎಚ್‌ಐವಿ ಸೋಂಕಿತ ಸೂಜಿ ಚುಚ್ಚಿರುವ ಘಟನೆ ನಡೆದಿದೆ.

30 ವರ್ಷದ ಸಂತ್ರಸ್ತೆ ವಿರುದ್ಧ ನಡೆದ ಈ ಅಮಾನವೀಯ ಕೃತ್ಯದ ಕುರಿತು, ಸಹರಾನ್‌ಪುರ ನ್ಯಾಯಾಲಯವು ಸ್ಥಳೀಯ ಪೊಲೀಸರಿಗೆ ದೂರು ದಾಖಲಿಸುವಂತೆ ಆದೇಶಿಸಿದೆ. ಮದುವೆಯಾದ ಕೂಡಲೆ, ಅತ್ತೆ-ಮಾವ ಸೊಸೆಗೆ ಕಿರುಕುಳ ನೀಡಲು ಪ್ರಾರಂಭಿಸಿದರು. ಆಕೆಯನ್ನು ಅವಮಾನಿಸಿ, ಮಗನಿಗೆ ಮತ್ತೊಂದು ಮದುವೆ ಮಾಡುವ ಬೆದರಿಕೆ ನೀಡಿದರು.
2023ರ ಮಾರ್ಚ್ 25ರಂದು, ಆಕೆಯನ್ನು ಮನೆಯಿಂದ ಹೊರಹಾಕಲಾಯಿತು. ಮೂರು ತಿಂಗಳ ನಂತರ ಆಕೆಯನ್ನು ಗಂಡನ ಮನೆಯವರಿಗೆ ಮರಳಿಸಲಾಯಿತು. ಆದರೆ ಅಲ್ಲೂ ದೈಹಿಕ ಹಾಗೂ ಮಾನಸಿಕ ಹಿಂಸೆ ಮುಂದುವರಿಯಿತು. 2024ರ ಮೇ ತಿಂಗಳಲ್ಲಿ, ಅತ್ತೆ-ಮಾವ ಬಲವಂತವಾಗಿ ಆಕೆಗೆ ಎಚ್‌ಐವಿ ಸೋಂಕಿತ ಸಿರಿಂಜ್ ಚುಚ್ಚಿದರು. ಇದರಿಂದಾಗಿ ಆಕೆಯ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ವೈದ್ಯಕೀಯ ಪರೀಕ್ಷೆಯಲ್ಲಿ ಆಕೆ ಎಚ್‌ಐವಿ ಪಾಸಿಟಿವ್ ಎಂದು ದೃಢಪಟ್ಟಿತು, ಆದರೆ ಆಕೆಯ ಪತಿ ಮಾತ್ರ ಎಚ್‌ಐವಿ ನೆಗೆಟಿವ್ ಆಗಿದ್ದಾನೆ.
“2023ರಲ್ಲಿ ನನ್ನ ಮಗಳ ಮದುವೆಗೆ 45 ಲಕ್ಷ ರೂ. ಖರ್ಚು ಮಾಡಿದ್ದೆವು. ವರನ ಕುಟುಂಬಕ್ಕೆ 15 ಲಕ್ಷ ರೂ. ನಗದು ಮತ್ತು ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಕಾರು ನೀಡಿದ್ದೆವು. ಆದರೂ ಅವರು ಹೆಚ್ಚುವರಿಯಾಗಿ 10 ಲಕ್ಷ ರೂ. ನಗದು ಮತ್ತು ದೊಡ್ಡ ಎಸ್‌ಯುವಿ ಕಾರು ಕೇಳಿದ್ದರು. ಆದಷ್ಟು ಬೇಗ ಕೊಡುತ್ತೇನೆ ಎಂದಿದ್ದೆ,” ಎಂದು ಅವರು ಭಾವುಕರಾಗಿ ತಿಳಿಸಿದ್ದಾರೆ.
(ನಮ್ಮ ಕನ್ನಡ ಧ್ವನಿ ನ್ಯೂಸ್ ಚಾನಲ್‌ಗಾಗಿ ಈ ಮಾಹಿತಿಯನ್ನು ಹಂಚಿಕೊಳ್ಳಿ ಮತ್ತು ಬೆಂಬಲಿಸಿ – nammakannadadhwani.com)