ಕನ್ನಡ ಚಿತ್ರರಂಗದಲ್ಲಿ ಮದುವೆಯ ಸಂಭ್ರಮ ಜೋರಾಗಿದೆ. ನಟಿ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಅದ್ದೂರಿ ಮದುವೆಗೆ ಚಿತ್ರರಂಗದ ಗಣ್ಯರು ಹಾಜರಾಗಿದ್ದರು. ಮದುವೆ ಬಳಿಕ ಅದ್ಧೂರಿ ಆರತಕ್ಷತೆ ಆಯೋಜನೆ ಮಾಡಲಾಗಿದ್ದು, ಇದೀಗ ಪಾರ್ಟಿಯೂ ನೆರವೇರಿದೆ. ಈ ಪಾರ್ಟಿಯಲ್ಲಿ ಮೇಘನಾ ರಾಜ್ ಹಾಗೂ ರಕ್ಷಿತಾ ಪ್ರೇಮ್ ತಮ್ಮ ನೃತ್ಯದಿಂದ ಎಲ್ಲರ ಮನಸೆಳೆದಿದ್ದಾರೆ.

ಕನ್ನಡ ಸಿನಿಮಾಗಳ ಕೆಲವು ಹಿಟ್ ಹಾಡುಗಳಿಗೆ ರಕ್ಷಿತಾ ಪ್ರೇಮ್, ಮೇಘನಾ ರಾಜ್, ಪ್ರಮೀಳಾ ಜೋಶಾಯ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನ ಕೊರಿಯೋಗ್ರಾಫರ್ಸ್ ಸೇರಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ, ರಾಣಾ ಅವರು ಪತ್ನಿ ರಕ್ಷಿತಾ ಜೊತೆ ಹೆಜ್ಜೆ ಹಾಕಿದ್ದು, ಈ ಮಜಾ ತುಂಬಿದ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಸ್ಪರ್ಧಿಗಳು ಹಾಗೂ ರಕ್ಷಿತಾ ಪ್ರೇಮ್ ಅವರ ತಾಯಿಯೂ ಈ ಡ್ಯಾನ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ.
ಫೆಬ್ರವರಿ 7ರಂದು ರಾಣಾ ಹಾಗೂ ರಕ್ಷಿತಾ ಅವರು ಏಳು ವರ್ಷಗಳ ಪ್ರೀತಿಗೆ ಮುದ್ರೆಯಿಟ್ಟು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಶೇಷವೆಂದರೆ, ರಾಣಾ ಅವರ ಪತ್ನಿಯ ಹೆಸರೂ ರಕ್ಷಿತಾ ಆಗಿದೆ. ರಾಣಾ ತಮ್ಮ ವೃತ್ತಿ ಜೀವನದಲ್ಲಿ ಸ್ಥಿರತೆ ಪಡೆಯುವವರೆಗೆ ರಕ್ಷಿತಾ ಅವರು ಕಾದಿದ್ದರು. ಇದೀಗ ಕುಟುಂಬಸ್ಥರು, ಚಿತ್ರರಂಗದ ಗಣ್ಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಈ ಮದುವೆಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ತೂಗುದೀಪ ಸೇರಿ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು.
ಆರತಕ್ಷತೆ ಸಮಾರಂಭದಲ್ಲಿ ನಟಿ ರಮ್ಯಾ ಅವರು ಭಾಗಿಯಾಗಿದ್ದು, ಬೇಡಿಕೆಯ ಹೀರೋಯಿನ್ ಆಗಿದ್ದ ರಮ್ಯಾ ಮತ್ತು ರಕ್ಷಿತಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳನ್ನು ಸಂತೋಷಗೊಳಿಸಿದೆ. ಮದುವೆಯಲ್ಲಿ ನಟ ಕಿಚ್ಚ ಸುದೀಪ್-ಪ್ರಿಯಾ ದಂಪತಿ, ಅಭಿಷೇಕ್ ಅಂಬರೀಶ್-ಅವಿವಾ ಬಿದ್ದಪ್ಪ, ಶ್ರೀಮುರಳಿ, ನಿಖಿಲ್ ಚೆಲುವರಾಯಸ್ವಾಮಿ ದಂಪತಿ, ಬಿವೈ ಯಜುವೇಂದ್ರ, ಶರ್ಮಿಳಾ ಮಾಂಡ್ರೆ, ಅನುಪಮಾ ಗೌಡ, ಅಶ್ವಿನಿ ಪುನೀತ್ ರಾಜ್‌ಕುಮಾರ್, ಕೃಷಿ ತಾಪಂಡ, ಪ್ರಿಯಾಂಕಾ ಉಪೇಂದ್ರ, ಮಾಳವಿಕಾ ಅವಿನಾಶ್, ರಮೇಶ್ ಅರವಿಂದ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
(ಮಿತ್ರರೇ, ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ NammaKannadaDhwani.com ಅನ್ನು ಬೆಂಬಲಿಸಿ. ದಿನನಿತ್ಯದ ತಾಜಾ ಸುದ್ದಿಗಳಿಗಾಗಿ ನಮ್ಮ ವಾಹಿನಿಯನ್ನು ಲೈಕ್ ಮಾಡಿ, ಶೇರ್ ಮಾಡಿ.)