ನ್ಯಾಯಾಲಯಗಳು ತೀರ್ಪು ನೀಡುವಾಗ ನೀತಿ, ನೈತಿಕತೆ, ಮತ್ತು ಕಾನೂನಿನ ತಳಹದಿ ಆಧರಿಸಿಕೊಳ್ಳುತ್ತವೆ. ಈ ಸಂಬಂಧ ಮಧ್ಯಪ್ರದೇಶ ಹೈಕೋರ್ಟ್ ನೀಡಿದ ತೀರ್ಪು ಮಹತ್ವದ್ದಾಗಿದೆ. ಪತ್ನಿ ಪರಪುರುಷನೊಂದಿಗೆ ದೈಹಿಕ ಸಂಬಂಧವಿಲ್ಲದೆ ಕೇವಲ ಪ್ರೀತಿ ಮತ್ತು ವಾತ್ಸಲ್ಯದ ಬಾಂಧವ್ಯವನ್ನು ಹೊಂದಿದ್ದರೆ, ಅದನ್ನು ವ್ಯಭಿಚಾರ ಎಂದು ಪರಿಗಣಿಸದಿರಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಪತ್ನಿಯು ಪರಪುರುಷನೊಂದಿಗೆ ದೈಹಿಕ ಸಂಬಂಧ ಹೊಂದಿದ್ದರೆ ಮಾತ್ರ ಅದನ್ನು ಅಕ್ರಮ ಸಂಬಂಧ ಅಥವಾ ವ್ಯಭಿಚಾರ ಎಂದು ಪರಿಗಣಿಸಲಾಗುವುದು. ಈ ವಿಷಯದಲ್ಲಿ, ಪತ್ನಿ ಬೇರೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಾಳೆ ಎಂಬ ಕಾರಣಕ್ಕೆ ಪತಿ ನೀಡಬೇಕಾದ ಜೀವನಾಂಶವನ್ನು ನಿರಾಕರಿಸಬಹುದು ಎಂಬ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ತಿರಸ್ಕರಿಸಿದೆ.
ನ್ಯಾಯಮೂರ್ತಿ ಜಿ.ಎಸ್. ಅಹ್ಲುವಾಲಿಯಾ ಈ ತೀರ್ಪು ನೀಡಿದ್ದು, ಗಂಡನ ಅಲ್ಪ ಆದಾಯ ಈ ನಿರ್ಧಾರಕ್ಕೆ ಕಾರಣವಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಪತಿ ಸಮರ್ಥ ವ್ಯಕ್ತಿಯಾಗಿದ್ದರೆ, ತಾನು ಪೋಷಣೆಗೆ ಹೊಣೆಯಾಗಿದ್ದು, ಹೆಂಡತಿಗೆ ನಿರ್ವಹಣಾ ಮೊತ್ತ ಪಾವತಿಸಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ನಮ್ಮ ಕನ್ನಡ ಧ್ವನಿ ವಾಹಿನಿಯೊಂದಿಗೆ ಮುಂದುವರಿಯಿರಿ! ಕರ್ನಾಟಕದ ತಾಜಾ ಸುದ್ದಿಗಳು, ಅಪ್‌ಡೇಟ್ಗಳು ಮತ್ತು ಮಹತ್ವದ ಮಾಹಿತಿಗಾಗಿ nammakannadadhwani.com ಅನ್ನು ಲೈಕ್ ಮಾಡಿ, ಶೇರ್ ಮಾಡಿ!